About Quiz

ಸ್ಪರ್ಧೆಯ ಕುರಿತು




ವಿಜಯನಗರ ಸಾಮ್ರಾಜ್ಯ!

ನಿಮಗೆಷ್ಟು ಗೊತ್ತಿದೆ, ಜಗತ್ತನ್ನೇ ಬೆರಗುಗೊಳಿಸಿದ್ದ ಹಿಂದೂ ಸಾಮ್ರಾಜ್ಯದ ಕಥೆ?
ಪುಸ್ತಕ ನಾವು ಕೊಡುತ್ತೇವೆ! ನೀವು ಓದಿ, ನಿಮ್ಮ ಜ್ಞಾನವನ್ನು ನಮ್ಮ ಸ್ಪರ್ಧೆಯಲ್ಲಿ ಒರೆಗೆ ಹಚ್ಚಿಕೊಳ್ಳಿ, ಲಕ್ಷಾಂತರ ರುಪಾಯಿಯ ಬಹುಮಾನಗಳನ್ನು ಗೆಲ್ಲಿ!

ಸ್ಪರ್ಧೆ:
Online (ಮೊಬೈಲ್, PC, ಲ್ಯಾಪ್ ಟಾಪ್ ಮೂಲಕ ಬರೆಯಬಹುದು)
ಹಂತಗಳು:
ಎರಡು
ಮೊದಲ ಹಂತ - ಬಹು-ಆಯ್ಕೆಯ ಉತ್ತರಗಳ ಮಾದರಿ, ದ್ವಿತೀಯ ಹಂತ - ವಿವರಣಾತ್ಮಕ ಪರೀಕ್ಷೆ. ಎರಡು ಹಂತಗಳ ನಡುವೆ 10 ದಿನಗಳ ಅಂತರ.
ಸ್ಪರ್ಧೆಯ ಭಾಷೆ:
ಕನ್ನಡ, ಇಂಗ್ಲಿಷ್. (ಆಯ್ಕೆ ಅಭ್ಯರ್ಥಿಯ ಇಚ್ಛೆ)

ಸ್ಪರ್ಧೆ ದಿನಾಂಕ:
ಮುಂದೆ ಪ್ರಕಟಿಸಲಾಗುವುದು ಹಾಗೂ ರಿಜಿಸ್ಟರ್ ಮಾಡಿಸಿದವರಿಗೆ ವೈಯಕ್ತಿಕವಾಗಿಯೂ ತಿಳಿಸಲಾಗುವುದು.
ಬಹುಮಾನಗಳು:
ಒಂದು ಮೊದಲ ಬಹುಮಾನ: ₹ 2,00,000.
ಎರಡು ದ್ವಿತೀಯ ಬಹುಮಾನಗಳು: ₹ 1,00,000 (ತಲಾ)
ಎರಡು ತೃತೀಯ ಬಹುಮಾನಗಳು: ₹ 50,000 (ತಲಾ)
20 ಸಮಾಧಾನಕರ ಬಹುಮಾನಗಳು (ಒಟ್ಟು ಮೌಲ್ಯ)₹ 1,00,000

ಪ್ರವೇಶ ಶುಲ್ಕ :
Rs. 99/-*
(* ‘ಹೊಸದಿಗಂತ ಡಿಜಿಟಲ್’ ಯೂ-ಟ್ಯೂಬ್ ಚಾನಲ್ಲಿಗೆ ಉಚಿತವಾಗಿ subscribe ಆಗುವವರಿಗೆ ಮಾತ್ರ. ಉಳಿದವರಿಗೆ, ₹ 199/-)

ಭಾಗವಹಿಸಲು ಯಾವುದೇ ವಯೋಮಿತಿಯ ನಿರ್ಬಂಧಗಳಿಲ್ಲ! ರಿಜಿಸ್ಟರ್ ಮಾಡಿಕೊಳ್ಳಲು ಕೊನೆಯ ದಿನಾಂಕ:15 ಮಾರ್ಚ್ 2025.

Registrations

15-03-2025

Last Date To Register

To Be Announced

Quiz Date

24/04/2025

Prize Distribution

ವಿಜಯನಗರ ಸಾಮ್ರಾಜ್ಯ!

ಮಹಾರಾಷ್ಟ್ರದಿಂದ ಶ್ರೀಲಂಕಾದವರೆಗೂ ಹಬ್ಬಿದ್ದ ಮಹಾ ಸಾಮ್ರಾಜ್ಯ ಅದು!

  • ಹದಿನಾಲ್ಕನೇ ಶತಮಾನದಿಂದ ಹದಿನೇಳನೇ ಶತಮಾನದವರೆಗೂ ಸುಮಾರು ಮೂರು ಶತಮಾನಗಳ ಕಾಲ ಜಗತ್ತೇ ಬೆರಗಾಗುವಂತೆ ವಿಜೃಂಭಿಸಿದ್ದ ಹಿಂದೂ ಸಾಮ್ರಾಜ್ಯ ಅದು!
  • ಅಕ್ಷರಶಃ ನಮ್ಮ ನಾಡಿನ ಸುವರ್ಣಯುಗದ ಅವಧಿ, ಆ ಮುನ್ನೂರು ವರ್ಷಗಳು..
    ಆದರೆ, ಅದರ ಬಗ್ಗೆ ನಮಗೆಷ್ಟು ಗೊತ್ತಿದೆ? ಶ್ರೀಕೃಷ್ಣ ದೇವರಾಯ ಅನ್ನುವ ಮಹಾಪುರುಷನ ಹೆಸರು, ಹಕ್ಕ-ಬುಕ್ಕರ ಹೆಸರು, ಮಹಾ ತಪಸ್ಸಿ ಶ್ರೀ ವಿದ್ಯಾರಣ್ಯರ ಹೆಸರು, "ರಸ್ತೆ ಬದಿಯಲ್ಲಿ ಚಿನ್ನ-ರತ್ನ-ವಜ್ರ ವೈಡೂರ್ಯಗಳನ್ನು ರಾಶಿ ಹಾಕಿಕೊಂಡು ಮಾರಾಟ ಮಾಡುತ್ತಿದ್ದರಂತೆ!” ಅನ್ನುವ ಬೆರಗಿನ ಉದ್ಘಾರಗಳು, ದೇಶ-ವಿದೇಶಗಳಲ್ಲೆಲ್ಲಾ ಅದರ ಖ್ಯಾತಿ ಹಬ್ಬಿತ್ತು ಅನ್ನುವ ಉಲ್ಲೇಖಗಳು,
ನಾಲ್ಕಾರು ಯುದ್ಧಗಳ ರೋಮಾಂಚಕ ಕಥೆಗಳು, “ನವರತ್ನ”ಗಳ ಪಾಂಡಿತ್ಯದ ಪ್ರಖರ ಪ್ರಸ್ತಾಪಗಳು… ಅಷ್ಟೇ!
ಅವೆಲ್ಲವನ್ನೂ ಒಳಗೊಂಡೂ ಅವೆಲ್ಲವನ್ನೂ ಮೀರಿದ ಒಂದು ಅದ್ಭುತ ಇತಿಹಾಸವಿದೆ ಅದಕ್ಕೆ. ಅದನ್ನು ಪರಿಚಯಿಸುವುದಕ್ಕಾಗಿಯೇ 'ಹೊಸದಿಗಂತ ಡಿಜಿಟಲ್' ನಡೆಸುತ್ತಿದೆ. ಒಂದು online ರಸಪ್ರಶ್ನೆ (ಕ್ರಿಜ್) ಸ್ಪರ್ಧೆ. ಇದರಲ್ಲಿ ಪಾಲ್ಗೊಂಡು ನಮ್ಮ ಹೆಮ್ಮೆಯನ್ನೂ ಜ್ಞಾನವನ್ನು ವೃದ್ಧಿ ಮಾಡಿಕೊಳ್ಳುವುದಕ್ಕೆ ಮತ್ತು ಲಕ್ಷಾಂತರ ರುಪಾಯಿಗಳಷ್ಟು ಬಹುಮಾನಗಳನ್ನು ಗೆಲ್ಲುವುದಕ್ಕೆ ವಯೋಮಿತಿಯ ನಿರ್ಬಂಧವಿಲ್ಲ!ರಿಜಿಸ್ಟರ್ ಮಾಡಿಕೊಳ್ಳಿ. ನಾವು ಒದಗಿಸುವ ಪುಸ್ತಕ ಓದಿ, ಕ್ವಿಜ್ ನಲ್ಲಿ ಭಾಗವಹಿಸಿ, ಪ್ರೈಜ್ ಗೆಲ್ಲಿ. ಹಮ್ಮ ನಿಮ್ಮದಾಗಲಿ!“ಹೊಸದಿಗಂತ" ಪತ್ರಿಕೆ ನಮ್ಮ ನೆಲದ ಒಂದು ಅತ್ಯಂತ ಜನಪ್ರಿಯ ದಿನಪತ್ರಿಕೆ, ನಿಜವಾದ ಭಾರತೀಯತೆಯನ್ನು ಕಾಯಾ ವಾಚಾ ಮನಸಾ ಅನುಸರಿಸುತ್ತಿರುವ ಪತ್ರಿಕೆ, ರಾಜ್ಯಾದ್ಯಂತ ಪ್ರಸಾರ ಇರುವ ಪತ್ರಿಕೆ, 46 ವರ್ಷಗಳಿಂದ ನಿರಂತರವಾಗಿ ಪ್ರಸಾರವಾಗುತ್ತಿರುವ ವಿಶ್ವಾಸಾರ್ಹ ಪತ್ರಿಕೆ. ಹೊಸ ದಿಗಂತ ಡಿಜಿಟಲ್ ಅನ್ನುವುದು, ಅದೇ ಪತ್ರಿಕೆಯ ಯೂ-ಟ್ಯೂಬ್ ಸ್ಟರೂಪ!